ಬುದ್ಧಿವಂತರು ಬಡವರಾಗುವುದು ಏಕೆ? | ನವೀನ್ ಕುಮಾರ್ ಎಂ.
🚀 Launch Offer: ₹400 ಬದಲು ₹299  |  🔥 ಕೇವಲ 100 ಪ್ರತಿಗಳಿಗೆ ಮಾತ್ರ  |  ಈಗಲೇ ಖರೀದಿಸಿ →
ಕನ್ನಡ ಪುಸ್ತಕ ಪ್ರಾಧಿಕಾರ ಧನಸಹಾಯ ಪಡೆದ ಕೃತಿ

ಬುದ್ಧಿವಂತರು
ಬಡವರಾಗುವುದು
ಏಕೆ?

ಹಣದ ಹಿಂದಿರುವ ವಿಜ್ಞಾನ — 15 ಅದ್ಭುತ ಸೂತ್ರಗಳು

ಲೇಖಕರು ನವೀನ್ ಕುಮಾರ್ ಎಂ.
ಬೆಲೆ 400 ₹299
ISBN 978-93-5679-417-7
ಪುಟಗಳು 280
ಬುದ್ಧಿವಂತರು ಬಡವರಾಗುವುದು ಏಕೆ? - ಪುಸ್ತಕ ಮುಖಪುಟ
₹400  ₹299 ಆಫರ್
ಮುನ್ನುಡಿ
ʼಆಧುನಿಕ ಪರಿವೇಷದ ಬುದ್ದಿವಂತರ ಯಶಸ್ಸಿಗೆ ಹದಿನೈದು ಸೂತ್ರಗಳುʼ

ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಗೆ ವಿಶೇಷ ಸ್ಥಾನವಿದೆ. ಈ ಜಿಲ್ಲೆ ವೈವಿಧ್ಯಮಯ ಪ್ರದೇಶ. ನೈಸರ್ಗಿಕ ಸಂಪತ್ತಿಗೆ ಹೆಸರಾದಂತೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕವಾಗಿಯೂ ಹೆಸರಾಗಿದೆ. ಶಿರಾಳಕೊಪ್ಪ ಜಿಲ್ಲೆಯ ದಕ್ಷಿಣಕ್ಕಿದೆ. ಇದು ಉತ್ತರ ಕನ್ನಡ ಜಿಲ್ಲೆ ಹಾಗು ಹಾವೇರಿ ಜಿಲ್ಲೆಗಳ ಗಡಿರೇಖೆಗಳನ್ನು ಹಂಚಿಕೊಂಡಿದೆ. ಈ ಭೂಪ್ರದೇಶ ಹಲವು ಶತಮಾನಗಳಷ್ಟು ಪ್ರಾಚೀನವಾದುದು..ಇಲ್ಲಿನ ಸನಿಹದ ಬಳ್ಳಿಗಾವೆ ತಾಳಗುಂದ ಮತ್ತು ಬಂದನಿಕೆಗಳಿಗೆ ಐತಿಹಾಸಿಕ ಹಿನ್ನಲೆ ಇದೆ. ಕದಂಬ ಸಾಮ್ರಾಜ್ಯ ಸಂಸ್ಥಾಪಕ ಮಯೂರ ವರ್ಮನ ಬಗ್ಗೆ ಮಾಹಿತಿ ನೀಡುವ ಕಾಕುಸ್ಥವರ್ಮನ ಸ್ತಂಭ ಶಾಸನ ತಾಳಗುಂದದಲ್ಲಿದ್ದರೆ, ಹೊಯ್ಸಳ ಸಾಮ್ರಾಟ ವಿಷ್ಣುವರ್ಧನನ ಪಟ್ಟಮಹಿಷಿ ಶಾಂತಲೆಯ ತವರೂರು ಸಹ ಇದೆ. ಅಲ್ಲದೆ ಶೂನ್ಯ ಸಿಂಹಾಸನಾಧೀಶ ಅಲ್ಲಮ ಪ್ರಭುಗಳ ಊರು ಸಹ ಇದೆ. ಹೆಸರಾಂತ ವಚನಗಾರ್ತಿ ಅಕ್ಕಮಹಾದೇವಿ ಸೇರಿದಂತೆ ಹಲವು ಶರಣ ಶರಣೆಯರ ನೆಲೆವೀಡು ಈ ಶಿರಾಳಕೊಪ್ಪದ ಅಪೂರ್ವ ಪರಿಸರ.

ಇಲ್ಲಿನ ಐತಿಹಾಸಿಕ ಶ್ರೀಮಂತಿಕೆ ಕುರಿತಂತೆ ಅಧಿಕೃತವಾಗಿ ಮಾತಾಡುವ ಸಂಪನ್ಮೂಲ ವ್ಯಕ್ತಿಗಳು ಜಿಲ್ಲೆಯಲ್ಲಿ ತೀರಾ ವಿರಳ, ಆದರೆ ಈ ಕೃತಿಕರ್ತೃ ನವೀನ್‌ ನೈಜ ಅರ್ಥದಲ್ಲಿ ಈ ಪ್ರದೇಶದ ಅಧಿಕೃತ ಚಾರಿತ್ರಿಕ ರಾಯಭಾರಿ. ಇಲ್ಲೆಲ್ಲ ಚೆಲ್ಲವರಿದಿರುವ ಅವಶೇಷಗಳ ಬಗ್ಗೆ ನೂರಾರು ಶಾಸನಗಳ ಬಗ್ಗೆ ಅಥೆಂಟಿಕ್ ಮಾಹಿತಿ ನೀಡಬಲ್ಲ ಗೆಳೆಯನೀತ. ಈತನ ಜೊತೆ ನಾನು ಹತ್ತಾರು ಸಲ ಈ ಪ್ರದೇಶದಲ್ಲಿ ಅಲೆದಾಡಿರುವೆ, ಕೇಳಿ ತಿಳಿದುಕೊಂಡಿರುವೆ, ಕದಂಬರ ಹಾಗೂ ಹೊಯ್ಸಳರ ಬಗ್ಗೆ ತಿಳವಳಿಕೆ ಪಡೆದಿರುವೆ. ಇದಿಷ್ಟೆ

ಅಲ್ಲದೆ ನಮ್ಮ ನವೀನ್ ಸಾಂಸ್ಕೃತಿಕ ಸಾಹಿತ್ಯಿಕವಾಗಿ ಆಸಕ್ತಿ ಇರುವ ಸದಭಿರುಚಿ ಯುವಕ. ತಮ್ಮ ಪರಿಸರದಲ್ಲಿ ಶಾಲೆ ಕಾಲೇಜು ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ಜಾಗೃತಿ ಮೂಡಿಸಲು ನಿರಂತರ ಶ್ರಮಿಸುತ್ತಿರುವನು. ಸಾಮಾನ್ಯ ಪ್ರಜೆಗಳಲ್ಲಿ ಸಾಮಾನ್ಯ ತಿಳವಳಿಕೆ ಬಿತ್ತಲು ನಿರಂತರ ಶ್ರಮಿಸುತ್ತಿರುವನು. ಶಾಲಾ ಮಕ್ಕಳಲ್ಲಿ ಕನ್ನಡ ಭಾಷೆ ಬಗೆಗೆ ಅರಿವನ್ನು ಬೆಳಗಿಸಲು ತಾನೇ ಕಂದೀಲು ಪಾತ್ರವಹಿಸಿರುವುದೂ ಉಂಟು. ಸಾಮಾಜಿಕ ಜಾಲದಾಣಗಳ ಜೊತೆ ಒಡನಾಟವಿರಿಸಿಕೊಂಡಿರುವ ಈತ ನಾಡಿನ ಹಲವಾರು ಲೇಖಕರ ಸಾಹಿತಿಗಳ ಸಮೀಪವರ್ತಿಯೂ ಹೌದು. ಎಲ್ಲದಕ್ಕಿಂತ ಮುಖ್ಯವಾಗಿ ಖ್ಯಾತ ಕಾದಂಬರಿಕಾರ ನಾ. ಡಿಸೋಜರ ನಿಕಟವರ್ತಿ ಮತ್ತು ಅವರ ಸಂಗಡ ಕೊನೆ ಗಳಿಗೆವರೆಗೆ ಒಡನಾಡಿದ ವ್ಯಕ್ತಿ ಈ ನಮ್ಮೆಲ್ಲರ ಪ್ರೀತಿಯ ಈ ಯುವ ಮಿತ್ರ.

ಈ ನಮ್ಮ ನವೀನ್‌ನ ಪರಿಚಯ ಹೇಗಾಯ್ತು! ಎಲ್ಲಾಯ್ತು! ಈ ಬಗ್ಗೆ ಖಚಿತ ಮಾಹಿತಿ ಇಲ್ಲ, ಆದರೆ ಒಂದಂತು ನಿಜ, ನಮ್ಮಿಬ್ಬರನ್ನು ಬೆಸೆದದ್ದು ಶಿಕಾರಿಪುರದ ಪತ್ರಕರ್ತ ಮಿತ್ರ ಹಚ್ಚೂರಾಯಪ್ಪ. ಸುಮಾರು ದಶಕದ ಹಿಂದಿನ ಮಾತು, ಶಿಕಾರಿಪುರಲ್ಲಿ ಮಯೂರ ವರ್ಮ ಪ್ರಶಸ್ತಿಗೆ ಸಂಬಂಧಿಸಿದಂತೆ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಅದು ಹಲವು ಲಕ್ಷಗಳ ಮೌಲ್ಯದ ಪ್ರಶಸ್ತಿ. ಶಾಲಾ ಮಕ್ಕಳಲ್ಲಿ ಕನ್ನಡ ಛಂದಸ್ಸು ವ್ಯಾಕರಣ ಒಳಗೊಂಡಂತೆ ಶಬ್ದ ಜ್ಞಾನಕ್ಕೆ ಸಂಬಂಧಿಸಿದ ಝಗಮಗಿಸುವ ಕಾರ್ಯಕ್ರಮ.

ನೇರ ಪ್ರಸಾರಕ್ಕೆಂದು ಯಾವುದೊ ಒಂದು ಛಾನಲ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಬೆಂಗಳೂರಿನಿಂದ ವಾದ್ಯವೃಂದ ಮಾತ್ರವಲ್ಲದೆ ಹೆಸರಾಂತ ನಿರೂಪಕಿಯನ್ನು ಸಹ ಕರೆಸಿದ್ದರು. ತೀರ್ಪುಗಾರರಲ್ಲಿ ನಾ. ಡಿಸೋಜ ಜೊತೆ ನಾನು ಸಹ ಇದ್ದೆ. ಅದೊಂದು ನಮ್ಮಿಬ್ಬರಿಗು ಹೊಸ ಅನುಭವ.

ಆ ಕಾರ್ಯಕ್ರಮ ಇಡೀ ರಾತ್ರಿ ನಡೆಯಿತು. ಎಷ್ಟು ಲಕ್ಷ ಖರ್ಚಾಗಿರುವುದೆಂದು ಕೇಳಿದ್ದಕ್ಕೆ ಹುಚ್ಚೂರಾಯಪ್ಪ ಹತ್ತು ಲಕ್ಷಕ್ಕಿಂತ ಹೆಚ್ಚು ಎಂದು ತಿಳಿಸಿದರು. ಆಶ್ಚರ್ಯವೆಂದರೆ ಆ ವೈಭವೋಪೇತ ಸಮಾರಂಭಕ್ಕೆ ಯಾರಿಂದ ಸಹ ದೇಣಿಗೆ ಸಂಗ್ರಹಿಸಿರಲಿಲ್ಲ. ಈ ನಮ್ಮ ನವೀನ್! ತನ್ನ ದುಡಿಮೆಯ ಹಣದಲ್ಲಿ ಆ ಕಾರ್ಯಕ್ರಮವನ್ನು ಏರ್ಪಡಿಸಿದ್ದ. ಈ ಅದಮ್ಯ ಸಾಹಸಿ ಅದಕ್ಕೆಂದೆ ಲಕ್ಷಾಂತರ ಸಾಲ ಮಾಡಿದ್ದ. ʼಈ ಅಪ್ರತಿಮ ಸಾಹಸದಿಂದ ನಿನಗ್ಯಾವ ಲಾಭವಾಯಿತುʼ ಎಂದು ಕೇಳಿದೆ, ಕುತೂಹಲಕ್ಕೆ. ಅದಕ್ಕೆ ಈ ಕೃತಿಯ ಕರ್ತೃ ನಕ್ಕ, ಅದರಲ್ಲಿ ಸ್ವಚ್ಚತೆಯಿತ್ತು. ಶಾಲಾ ಮಕ್ಕಳಲ್ಲಿ ಛಂದಸ್ಸು ವ್ಯಾಕರಣದ ಬಗ್ಗೆ ಕನಿಷ್ಟ ಪ್ರಾಥಮಿಕ ಜ್ಞಾನವಿಲ್ಲವೆಂದು ತಿಳಿಸಿದ. ಮನುಷ್ಯನ ಉಳಿವಿಗೆ ಭಾಷೆ ಎಷ್ಟು ಮುಖ್ಯವೊ, ಭಾಷೆ ಉಳಿವಿಗೆ ಮನುಷ್ಯನ ಪ್ರಯತ್ನವೂ ಅಷ್ಟೇ ಮುಖ್ಯವೆಂದು ತಿಳಿಸಿದ. ಕಾರಣ ಆ ಕಾರ್ಯಕ್ರಮಕ್ಕೆ ಪ್ರಶ್ನಾವಳಿಯ ಸಿದ್ದತೆಯಲ್ಲಿ ಹಲವು ಕನ್ನಡ ಪ್ರಾಧ್ಯಾಪಕರು ಭಾಷಾ ಪ್ರೌಢಿಮೆ ಉಳ್ಳವರು ಶ್ರಮಿಸಿದ್ದರು. ಪ್ರತಿ ಪ್ರಶ್ನೆಯೂ ಅರ್ಥಪೂರ್ಣವಾಗಿತ್ತು. ನವೀನ್‌ಗೆ ಕನ್ನಡ ನುಡಿ ಬಗೆಗಿನ ಕಳಕಳಿಗೆ ಇದು ಒಂದು ನಿದರ್ಶನ ಮಾತ್ರ.

ಇಂಥ ಹಲವು ಹುಚ್ಚು ಮತ್ತು ಶ್ಲಾಘನೀಯ ಭಾಷಿಕ ಕೆಲಸಗಳಿಗೆ ಕೈ ಹಾಕಿ ಈ ನವೀನ್‌ ಇನ್ನೂ ಸಾಲಗಾರನಾಗಿ ಮುಂದುವರೆಸಿದ್ದಾನೆ. ಸ್ವಯಾರ್ಜಿತ ಅಥವಾ ಪಿತ್ರಾರ್ಜಿತ ಆಸ್ತಿ ಏನಾದರು ಇದೆಯೆ! ವಿಚಾರಿಸಿದೆ, ಆದರೆ ಅದ್ಯಾವುದೂ ಇಲ್ಲ. ಶಿರಾಳಕೊಪ್ಪದ ಬಸ್‌ನಿಲ್ದಾಣದ ಬಳಿ ಅಂತರ್‌ಜಾಲ ಸೌಕರ್ಯಕ್ಕೆ ಸಂಬಂಧಿಸಿದ ಒಂದು ಪುಟ್ಟ ಮಳಿಗೆಯ ಮಾಲಿಕನೀತ. ಆ ಸೀಮಿತ ಆದಾಯದಲ್ಲಿ ಈ ಲಾಭ ರಹಿತ ಚಟವಟಿಕೆಗಳು ಬೇರೆ. ಸಾಮಾಜಿಕ ಜವಾಬ್ದಾರಿ ಈತನ ಹವ್ಯಾಸ.

ನಮ್ಮ ನವೀನ್‌ಕುಮಾರ್‌ ಎಂ ಸದಭಿರುಚಿ ಓದುಗ, ಹಲವು ಹೆಸರಾಂತ ಸಾಹಿತಿಗಳ ಒಡನಾಡಿ, 15 ವರ್ಷ ಪ್ರಜಾವಾಣಿ, ಹಾಲಿ ವಿಜಯವಾಣಿ ದೈನಿಕಗಳ ಸ್ಥಳೀಯ ವರದಿಗಾರನಾಗಿದ್ದವ, ಅದೂ ಕಳೆದ ಒಂದೂವರೆ ದಶಕದಿಂದ. ಸೃಜನಶೀಲ ವರದಿಗಾರ, ಈ ಮೂಲಕ ನುಡಿ ಸೇವಕ. ಅಲ್ಲದೆ ವ್ಯಕ್ತಿತ್ವ ವಿಕಸನಪಟು, ಇದಕ್ಕೆ ಪೂರಕವಾಗಿ ಒಂದು ಕೈಪಿಡಿಯನ್ನು ಪ್ರಕಟಿಸಿರುವನು, ಅದರ ಶೀರ್ಷಿಕೆ ʼಮೆದುಳಿಗೆ ಮೇವುʼ ಈ ಕಿರುಹೊತ್ತಿಗೆ ಸಾಕಷ್ಟು ಜನಪ್ರಿಯವಾಯಿತು.

ಲಾಭ ನಷ್ಟಗಳ ಬೆನ್ನ ಮೇಲೆ ನಿತ್ಯ ಸವಾರಿ ಮಾಡುವ ಈ ಕ್ರಿಯಾಶೀಲ ಇಂಟರೆಸ್ಟಿಂಗ್‌ ಗೆಳೆಯ. ಇನ್ನೊಂದು ಉಲ್ಲೇಖಾರ್ಹ ಸಂಗತಿ ಅಂದರೆ ಈ ನಮ್ಮ ನವೀನ್‌ಕುಮಾರ್ ಸೀಮಿತ ವಲಯದಲ್ಲಿ ಹೆಸರಾಂತ ಯೂಟ್ಯೂಬರ್! ಅದರ ಉದ್ದೇಶ ಮನರಂಜನೆಯಲ್ಲ. ಸಾಮಾನ್ಯ ಪ್ರಜೆಗಳ ಸಾರ್ವಜನಿಕ ಜೀವನದಲ್ಲಿ ಸಮಸ್ಯೆಗಳನ್ನು ಪತ್ತೆ ಮಾಡುವುದು, ಅವುಗಳಿಗೆ ತನ್ನ ಛಾನಲ್‌ ಮೂಲಕ ಪರಿಹಾರ ಸೂಚಿಸುವುದು, ಪ್ರಜೆಗಳ ಯುವಕರ ದೈನನಂದಿನ ಸಮಸ್ಯೆಗಳೆಂಬ ಯಕ್ಷಪ್ರಶ್ನೆಗಳಿಗೆ ಪ್ರಾಕ್ಟಿಕಲ್‌ ಮತ್ತು ಪಾಜಿಟಿವ್‌ ಸಮಾಧಾನಗಳನ್ನು ಕಂಡುಕೊಳ್ಳುವುದು, ಅವುಗಳಿಗೆ ಸಾಂದರ್ಭಿಕವಾಗಿ ಸಕಾಲಿಕವಾಗಿ ಸೂಕ್ತ ಮಾರ್ಗದರ್ಶನ ನೀಡುವುದು. ಹೀಗೆ.. ಇಂಥ ಹಲವು ಯಕ್ಷಪ್ರಶ್ನೆಗಳಿಗೆ ಉತ್ತರದಾಯಿತ್ವ ಈ ಕೃತಿ.

ʼಏನಾದರು ಮಾಡುತಿರು ತಿಮ್ಮ ಸುಮ್ಮನಿರಬೇಡʼ ಇದು ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲು. ಕವಿಯ ಆಶಯದಂತೆ ನವೀನ್‌ ಸುಮ್ಮನಿರುವ ಆಸಾಮಿಯಲ್ಲ. ಸೃಜನಶೀಲ ಆಲೋಚನೆಯ ಮುಂದುವರೆದ ಅಂಕವೇ ಈ ಕೃತಿ. ಹ್ಹಾ ಅಂದ ಹಾಗೆ ನಮ್ಮ ನವೀನ್‌ ಕುಮಾರ್‌ ಸಾಹಿತಿ ಅಲ್ಲವೆಂದು ಹೇಳಿದೆ. ಆದರೆ ನಿರಂತರ ಅಕ್ಷರಗಳ ಒಡನಾಡಿ. ಛಾನಲ್‌ನಲ್ಲಿ ತಾನು ಆಡಿದ ಮಾತುಗಳನ್ನು ವಾಕ್ಯಗಳನ್ನಾಗಿ ಪರಿವರ್ತಿಸಿದ್ದಾನೆ. ಇವು ಬರಹಗಳ ರೂಪದ ಮಿಣುಕು ಹುಳುಗಳು, ತಡವರಿಸುವ ದಾರಿಹೋಕರಿಗೆ ಹಾದಿ ತೋರಿಸುವ ಸಾಮರ್ಥ್ಯ ಈ ಕೃತಿಯಲ್ಲಿನ ಪುಟ್ಟ ಪುಟ್ಟ ಬರಹಗಳಿಗೆ ನಿಶ್ಚಿತವಾಗಿಯೂ ಇದೆ.

ಇನ್ನು ಈ ಕೃತಿಯ ಮೇಲೆ ಅಕ್ಷರದ ಬೆಳಕು ಚೆಲ್ಲೋಣ. ಕೃತಿಯ ತಾಂತ್ರಿಕ ವಿಭಾಗದ ಮೊದಲ ಪುಟವೇ ನಮ್ಮ ಕಣ್ಣುಗಳ ಹುಬ್ಬೇರಿಸುವಂತಿದೆ.

ʼಬುದ್ದಿವಂತರು ಬಡವರಾಗುವುದು ಏಕೆ!ʼ — ಇದು ಈ ಕೃತಿಯ ಪ್ರಧಾನ ಮತ್ತು ಧ್ವನಿಪೂರ್ಣ ಶೀರ್ಷಿಕೆ, ಇದು ತಮಾಷೆ ಅನ್ನಿಸುವಂಥ ಮತ್ತು ಚಿಂತನೆಗೆ ಪ್ರೇರೇಪಿಸುವಂಥ ಶೀರ್ಷಿಕೆ ಅಲ್ಲವೆ! ನಿಮ್ಮ ದೃಷ್ಟಿಯನ್ನು ಮೆಲ್ಲಗೆ ಕೆಳಗೆ ತನ್ನಿ, ʼಹಣದ ಹಿಂದಿರುವ ವಿಜ್ಞಾನʼ — ಇದು ಉಪ ಶೀರ್ಷಿಕೆ, ʼಇದು ಹಣ ಗಳಿಸುವ ಪುಸ್ತಕ ಅಲ್ಲ, ಹಣ ಏಕೆ ಕೈತಪ್ಪುತ್ತದೆ ಎಂಬುದನ್ನು ಕಲಿಸುವ ಪುಸ್ತಕʼ — ಎಂಬ ಸೂಚನೆ ಅದೇ ಪುಟದಲ್ಲಿದೆ. ಎಲ್ಲರೂ ಗಮನಿಸಲೇಬೇಕಾದ ಸೂಚನಾ ಪಲಕ ಯಾವುದೆಂದರೆ, ʼಸೂಚನೆ – ಟೈಂ ಪಾಸ್‌ ಮಾಡುವವರು ಈ ಪುಸ್ತಕ ಖರೀದಿಸಬೇಡಿ, ಇದು ಜೀವನವನ್ನು ಗಂಭಿರವಾಗಿ ಪರಿಗಣಿಸುವವರಿಗಾಗಿ ಮಾತ್ರ!

ಕೃತಿಯೊಳಗಿನ ಹೂರಣವನ್ನು ಮೇಲಿನ ಮಾತುಗಳು ಪ್ರತಿಫಲಿಸುವವಲ್ಲವೆ! ತಮ್ಮ ತಮ್ಮ ಜೀವನದಲ್ಲಿ ಕಳೆದುಕೊಂಡಿರುವ ಮತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಈ ಕೃತಿಯಲ್ಲಿ ಪರಿಹಾರವಿದೆ ಎಂದು ತಕ್ಷಣ ಹೊಳೆಯುವುದು ಅಲ್ಲವೆ! ಈ ಕಾರಣಕ್ಕೆ ನವೀನನ ಈ ಕೈಪಿಡಿ ವಾಚಕನ ಬಲಂಗೈಯಲ್ಲಿನ ಧನರೇಖೆಯ ಭವಿಷ್ಯವನ್ನು ವ್ಯಾಖ್ಯಾನಿಸುವುದು ಮತ್ತು ಅದನ್ನು ವೃದ್ದಿಗೊಳಿಸುವುದು ಎಂದೆನ್ನಿಸುತ್ತದೆ ಅಲ್ಲವೆ!

ಒಂದೆ ಮಾತಲ್ಲಿ ಹೇಳುವುದಾದರೆ ಈ ಪುಸ್ತಕದಲ್ಲಿ ದಾಖಲಿಸಿರುವ ಮಾತುಗಳು ನಮ್ಮ ನವೀನನ ಅನುಭವ ಜನ್ಯ ಮಾತುಗಳು. ತನ್ನ ಬಳಿಗೆ ಬರುವ ಫಲಾನುಭವಿಗಳ ಸಂಗಡ ಒಡನಾಡಿದ ಫಲಶೃತಿ. ಈ ಉತ್ಸಾಹಿಯ ಫಲಾನುಭವಿಗಳಲ್ಲಿ ಅನಕ್ಷಸ್ಥರು ತೀರಾ ವಿರಳ, ಸುಶಿಕ್ಷಿತರಲ್ಲಿ ಮುಖ್ಯವಾಗಿ ನಿರುದ್ಯೋಗಿ ಯುವಕರೆ ಅಧಿಕ. ಸಾಮಾನ್ಯವಾಗಿ ಅವರ ಕನಸುಗಳ ಸ್ಥಾಯಿ ಹಣ. ಕಲಿತ ವಿದ್ಯೆಗೂ ಹಣಕ್ಕು ಇರುವ ಕಲ್ಪಿತ ಸಂಬಂಧದ ವ್ಯಾಖ್ಯಾನ ಇಲ್ಲಿದೆ.

ಈ ಕೃತಿಯಲ್ಲಿನ ಪರಿವಿಡಿಯ ಶೀರ್ಷಿಕೆಗಳ ಮೇಲೆ ಕುತೂಹಲಕ್ಕೆ ಒಮ್ಮೆ ಕಣ್ಣಾಯಿಸಿದರೆ ನಿಮಗೆ ಸ್ವಷ್ಟವಾಗುವುದು. ಹಣದ ಹೈಜಾಕ್‌, ಬಡತನದ ಸ್ವಿಚ್‌ ಎಲ್ಲಿದೆ!, ಶಾಂತ ಮೆದುಳು ತುಂಬಿದ ಜೇಬು, ನಿಮ್ಮ ದೇಹವೇ ಮೊದಲ ಶೇರು ಮಾರುಕಟ್ಟೆ, ಯಶಸ್ಸಿನ ಕೆಮಿಸ್ಟ್ರಿ, ಅದೃಷ್ಟವಲ್ಲ ಅದು ಪಿಜಿಕ್ಸ್‌, ಧನ್ಯವಾದ ಎಂಬ ಮಂತ್ರದಂಡ, ಹಣವನ್ನು ಹುಡಕಬೇಡಿ.. ವಗೈರೆ ವಗೈರೆ! ಇಲ್ಲಿನ ಎರಡು ನೂರೂ ಚಿಲ್ಲರೆ ಪುಟಗಳಲ್ಲಿ ಇಂಥವೇ ಸುಮಾರು ಹದಿನೈದು ಅಧ್ಯಾಯಗಳಿವೆ.

ಆಧುನಿಕ ಮನುಷ್ಯನನ್ನು ಅರ್ಥಿಕ ವ್ಯವಹಾರಗಳೊಂದಿಗೆ ಬೆಸೆಯುವ ಪ್ರಯತ್ನ ಇಲ್ಲಿದೆ. ಇಲ್ಲಿನ ಬರಹಗಳನ್ನು ಓದಿದಾಗ ನಮ್ಮ ನವೀನ್ ಅರ್ಥಶಾಸ್ತ್ರಜ್ಞ ಅನ್ನಿಸುತ್ತದೆ. ವಾರೆನ್‌ ಬಫೆಟ್ ಸೇರಿದಂತೆ ಹಲವು ಅಂತರ್ರಾಷ್ಟ್ರೀಯ ಮಾರುಕಟ್ಟೆ ತಜ್ಞರ ಚಿಂತನಾ ಕ್ರಮಗಳಿಂದ ಪ್ರಭಾವಿತ ಅನಿಸುತ್ತದೆ. ಹಲವೆಡೆ ಹಣಕ್ಕು ಮನಸ್ಸಿಗು ಲಿಂಕ್‌ ಮಾಡಿರುವುದನ್ನು ನೋಡಿದರೆ ನವೀನ್‌ ಅರ್ಥಮನೋವಿಜ್ಞಾನಿ ಅನ್ನಿಸುತ್ತದೆ. ನಡಾವಳಿ ಕನ್ನಡದ ಜೊತೆ ವ್ಯವಹಾರಿಕ ಇಂಗ್ಲೀಷ್‌ ಪದಗಳನ್ನು ಸಂಯೋಜಿಸಿ ವಾಕ್ಯಗಳನ್ನು ಕಟ್ಟಿರುವುದನ್ನು ನೋಡಿದರೆ ನವೀನ್‌ ವ್ಯವಹಾರಿಕ ಕನ್ನಡ ಭಾಷಾತಜ್ಞ ಎಂಬ ಅನುಮಾನ ಬರುತ್ತದೆ.

ಬುದ್ದಿವಂತರು ಬಡವರಾಗುವುದನ್ನು ತಡೆಯುವ ಆಧುನಿಕ ಚಿಂತನಾಕ್ರಮ ಕೃತಿಯ ಪ್ರತಿ ವಾಕ್ಯದಲ್ಲಿದೆ.

ಈ ಕೃತಿ ವ್ಯವಹಾರಿಕ ದೃಷ್ಟಿಯಿಂದ ಒಂದು ಸಫಲ ಮತ್ತು ಕಾಳಜಿಯುಕ್ತ ಪ್ರಯತ್ನ. ಇಲ್ಲಿನ ವಸ್ತು ವಿಶೇಷ ಸಾಮಾನ್ಯ ವ್ಯಾಖ್ಯಾನಕ್ಕೆ ನಿಲುಕುವಂಥದ್ದಲ್ಲ. ಓದಿಯೇ ಸವಿಯಬೇಕು, ಇಲ್ಲಿನ ಆಧುನಿಕ ಅರ್ಥಶಾಸ್ತ್ರೀಯತೆಯನ್ನು ನಿಮ್ಮ ನಿಮ್ಮ ಆಧುನಿಕ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರೆ ಬದ್ದಿವಂತರಾದ ನೀವು (ಸುಶಿಕ್ಷಿತರಲ್ಲ) ಆರ್ಥಿಕವಾಗಿ ಪ್ರಗತಿ ಸಾಧಿವುದು ನಿಶ್ಚಿತ.

ಶಿರಾಳಕೊಪ್ಪದ ನವೀನ್‌ನ ಈ ಫೈನಾನ್ಸಿಯಲ್‌ ಕೆಮಿಸ್ಟ್ರಿ ಫ್ಯಾಕ್ಟರಿ ಯಾನೆ ಬ್ಯುಜಿನೆಸ್‌ಸಲ್ಲಿ ನೀವೂ ಭಾಗಿಯಾಗಿ, ಈ ಕೃತಿ ಖರೀದಿಸಿ ಈ ಭಾವನಾತ್ಮಕ ದಿಕ್ಸೂಚಿಯಲ್ಲಿನ ಕೊಂಡಿಗಳಾಗಿ.

✍️
ಕುಂವಿ (ಕುಂ. ವೀರಭದ್ರಪ್ಪ)
ಹಿರಿಯ ಕನ್ನಡ ಸಾಹಿತಿ ಮತ್ತು ಖ್ಯಾತ ವಿಚಾರವಂತರು
ಮುನ್ನುಡಿ ಲೇಖಕರು
🏛️ ಕರ್ನಾಟಕ ಸರ್ಕಾರ — ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಪಡೆದ ಕೃತಿ  |  📖 ISBN: 978-93-5679-417-7  |  🖨️ ಪ್ರಕಾಶಕರು: ಪ್ರಣವ್ ಪಬ್ಲೀಕೇಶನ್
ಪುಸ್ತಕದ ಬಗ್ಗೆ
ಈ ಪುಸ್ತಕ ಹಣ ಮಾಡುವ trick ಹೇಳಲ್ಲ.

ಬದಲಾಗಿ — ಬುದ್ಧಿವಂತರ ಕೈಯಿಂದಲೂ ಹಣ ಏಕೆ ಜಾರಿಕೊಳ್ಳುತ್ತದೆ, ಮತ್ತು ಅದನ್ನು ತಡೆಯುವ 15 ವೈಜ್ಞಾನಿಕ ಸೂತ್ರಗಳನ್ನು ಹೇಳ್ತದೆ.

ಶಿಕ್ಷಣ ವ್ಯವಸ್ಥೆ ನಮಗೆ ಪರೀಕ್ಷೆಯಲ್ಲಿ ಗೆಲ್ಲಲು ಕಲಿಸಿತು — ಆದರೆ ಹಣವನ್ನು manage ಮಾಡಲು ಕಲಿಸಲಿಲ್ಲ. ಈ ಪುಸ್ತಕ ಆ ಕಂದಕವನ್ನು ತುಂಬ್ತದೆ.

💰
Money Hijack — ಹಣ ಹೈಜಾಕ್
ನಿಮ್ಮ ಹಣ ನಿಮ್ಮ ಕೈ ಮುಟ್ಟುವ ಮೊದಲೇ ಹೇಗೆ ದೋಚಿಕೊಳ್ಳಲ್ಪಡ್ತದೆ
🔘
Poverty Switch — ಬಡತನದ ಸ್ವಿಚ್
ಮನಸ್ಸಿನ programming ನಮ್ಮನ್ನು ಆರ್ಥಿಕವಾಗಿ ಹೇಗೆ ಕುಗ್ಗಿಸ್ತದೆ
🧘
ಶಾಂತ ಮೆದುಳು — ತುಂಬಿದ ಜೇಬು
Mental peace ಮತ್ತು financial growth ನ ನೇರ ಸಂಬಂಧ
ಅದೃಷ್ಟ ಅಲ್ಲ — Physics
ಸಂಪತ್ತು ಕಾರ್ಯ-ಕಾರಣ ನಿಯಮದ ಭೌತಶಾಸ್ತ್ರದಂತೆ ಕೆಲಸ ಮಾಡ್ತದೆ
🔬
ಯಶಸ್ಸಿನ Chemistry
ಯಶಸ್ಸಿಗೆ ನಿರ್ದಿಷ್ಟ formula ಇದೆ — ಒಂದು ingredient ಕಡಿಮೆ = failure
ಪ್ರಶಸ್ತಿ ಮತ್ತು ಮಾಧ್ಯಮ ಗೌರವ

🏆 ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮನ್ನಣೆ ಪಡೆದ ಕೃತಿ — ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟ

ಕನ್ನಡ ಪುಸ್ತಕ ಪ್ರಾಧಿಕಾರ ಮನ್ನಣೆ — ಪತ್ರಿಕಾ ಸುದ್ದಿ

📰 ನಮ್ಮನಾಡು, ಹೊಸ ದಿಗಂತ, ವಿಶ್ವವಾಣಿ ಸೇರಿ ಅನೇಕ ಪತ್ರಿಕೆಗಳಲ್ಲಿ ಪ್ರಕಟ | Jan–Feb 2026

ವಿಶ್ವವಾಣಿ ಪತ್ರಿಕೆ
📰 ವಿಶ್ವವಾಣಿ | 30.01.2026
ಹೊಸ ದಿಗಂತ ಪತ್ರಿಕೆ
📰 ವಿಜಯವಾಣಿ | 29.01.2026
ವಿಜಯವಾಣಿ ಪತ್ರಿಕೆ
📰 ವಿಜಯವಾಣಿ
ಪತ್ರಿಕೆ ಸುದ್ದಿ
📰 ಕನ್ನಡ ಪತ್ರಿಕೆ
ಪತ್ರಿಕೆ 29-01-2026
📰 ಕನ್ನಡ ಪತ್ರಿಕೆ | 29.01.2026
📖 ಉಚಿತ ಮಾದರಿ
ಪುಸ್ತಕದ ಒಳನೋಟ

ಪೀಠಿಕೆ ಮತ್ತು ಅಧ್ಯಾಯ 1 — ಓದಿ ನಿರ್ಧರಿಸಿ

ಪೀಠಿಕೆ

ಸ್ನೇಹಿತರೇ,

ನೀವು ಎಂದಾದರು ಗಮನಿಸಿದ್ದೀರಾ? ನಾವು ಕನ್ನಡಿ ನೋಡುವಾಗ, ಮುಖದ ಮೇಲೇ ಧೂಳು ಇದ್ದರೆ, ನಾವು ಕನ್ನಡಿಯನ್ನು ಒರೆಸುತ್ತೇವೆ. ಆದರೆ ಎಷ್ಟೇ ಒರೆಸಿದರೂ ಧೂಳು ಹೋಗುವುದಿಲ್ಲ. ಯಾಕೆಂದರೆ ಧೂಳು ಇರುವುದು ಕನ್ನಡಿಯ ಮೇಲಲ್ಲ, ನಮ್ಮ ಮುಖದ ಮೇಲೇ!

ಇಂದು ನಮ್ಮ ಆರ್ಥಿಕ ಜೀವನವೂ ಹೀಗೆಯೇ ಆಗಿದೆ.

ನಾವು ಹಣದ ಸಮಸ್ಯೆಯನ್ನು ಬಗೆಹರಿಸಲು "ಹೊರಗಡೆ" ಪ್ರಯತ್ನಿಸುತ್ತಿದ್ದೇವೆ:

  • • ನಾವು ಹೆಚ್ಚು ಕೆಲಸ ಮಾಡುತ್ತೇವೆ (Hard Work).
  • • ನಾವು ಬಿಸಿನೆಸ್ ಬದಲಾಯಿಸುತ್ತೇವೆ.
  • • ನಾವು ಊರು ಬದಲಾಯಿಸುತ್ತೇವೆ.
  • • ನಾವು ಹೊಸ ಪದವಿಗಳನ್ನು (Degrees) ಪಡೆಯುತ್ತೇವೆ.

ಆದರೆ... ಫಲಿತಾಂಶ ಮಾತ್ರ ಬದಲಾಗುವುದಿಲ್ಲ. ಸಾಲ ಹಾಗೆಯೇ ಇರುತ್ತದೆ. ಒತ್ತಡ ಹಾಗೆಯೇ ಇರುತ್ತದೆ.

ಯಾಕೆ? ಯಾಕೆಂದರೆ ನಾವು ಕನ್ನಡಿಯನ್ನು (ಬಾಹ್ಯ ಜಗತ್ತನ್ನು) ಒರೆಸುತ್ತಿದ್ದೇವೆ. ಆದರೆ ಬದಲಾವಣೆ ಆಗಬೇಕಿರುವುದು ನಮ್ಮ ಮುಖದ ಮೇಲೆ (ಅಂತರಿಕ ಜಗತ್ತಿನಲ್ಲಿ).

ಈ ಪುಸ್ತಕವು ಆ "ಅಂತರಿಕ ಬದಲಾವಣೆಯ" ಕೈಪಿಡಿಯಾಗಿದೆ.

ಇಲ್ಲಿಯವರೆಗೆ ನೀವು ಹಣಕಾಸಿನ ಬಗ್ಗೆ ಓದಿರುವ ಪುಸ್ತಕಗಳಿಗೂ, ಇದಕ್ಕೂ ಒಂದು ದೊಡ್ಡ ವ್ಯತ್ಯಾಸವಿದೆ. ಬೇರೆ ಪುಸ್ತಕಗಳು ನಿಮಗೆ "ಹಣದ ಜೊತೆ ಏನು ಮಾಡಬೇಕು?" (What to do with money?) ಎಂದು ಕಲಿಸುತ್ತವೆ. ಆದರೆ ಈ ಪುಸ್ತಕ ನಿಮಗೆ "ಹಣದ ಜೊತೆ ನೀವು ಹೇಗಿರಬೇಕು?" (How to be with money?) ಎಂದು ಕಲಿಸುತ್ತದೆ.

ಈ ಪುಸ್ತಕದಲ್ಲಿ ನಾವು ಮೂರು ಪ್ರಮುಖ ರಹಸ್ಯ ಲೋಕಗಳನ್ನು ಪ್ರವೇಶಿಸಲಿದ್ದೇವೆ:

  1. ಜೀವಶಾಸ್ತ್ರ (Biology): ನಿಮ್ಮ ದೇಹದ 50 ಟ್ರಿಲಿಯನ್ ಜೀವಕೋಶಗಳು ಮತ್ತು ನಿಮ್ಮ ರಕ್ತದಲ್ಲಿ ಹರಿಯುವ ರಾಸಾಯನಿಕಗಳು (Chemicals) ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೇಗೆ ನಿರ್ಧರಿಸುತ್ತವೆ?
  2. ಮನಃಶಾಸ್ತ್ರ (Psychology): ನಿಮ್ಮ ಮೆದುಳಿನ ಭಯ (Fear) ಮತ್ತು ಆಸೆಗಳ (Desire) ಕೇಂದ್ರಗಳು ನಿಮ್ಮನ್ನು ಆರ್ಥಿಕವಾಗಿ ಹೇಗೆ ನಿಯಂತ್ರಿಸುತ್ತವೆ?
  3. ಭೌತಶಾಸ್ತ್ರ (Physics): ಈ ಬ್ರಹ್ಮಾಂಡದ ಶಕ್ತಿ ಮತ್ತು ನಿಮ್ಮ ಆಲೋಚನೆಯ ತರಂಗಾಂತರಗಳು (Frequencies) ಹೇಗೆ ಅವಕಾಶಗಳನ್ನು ಆಕರ್ಷಿಸುತ್ತವೆ?

ನೆನಪಿಡಿ, ಹಣವನ್ನು ಸಂಪಾದಿಸುವುದು ಒಂದು "ಆಟ" (Game). ಆದರೆ ದುರದೃಷ್ಟವಶಾತ್, ನಮಗೆ ಶಾಲೆಯಲ್ಲಿ ಆಟದ ನಿಯಮಗಳನ್ನು (Rules) ಹೇಳಿಕೊಡದೆ ಮೈದಾನಕ್ಕೆ ಇಳಿಸಲಾಗಿದೆ. ಅದಕ್ಕೇ ಬುದ್ಧಿವಂತರೂ ಕೂಡ ಇಲ್ಲಿ ಸೋಲುತ್ತಿದ್ದಾರೆ.

ಈ ಪುಸ್ತಕವು ಆ "ನಿಯಮಗಳ ಪುಸ್ತಕ" (Rule Book).

ನೀವು ಮುಂದಿನ ಪುಟವನ್ನು ತಿರುಗಿಸಿದಾಗ, ನೀವು ಕೇವಲ ಹೊಸ ಅಧ್ಯಾಯಕ್ಕೆ ಕಾಲಿಡುವುದಿಲ್ಲ; ನೀವು ನಿಮ್ಮದೇ ಮೆದುಳಿನ ಹೊಸ ಆಯಾಮಕ್ಕೆ ಕಾಲಿಡುತ್ತೀರಿ. ಹಳೆಯ ನಂಬಿಕೆಗಳನ್ನು ಬಿಡಿಗಿಡಿ. ನಿಮ್ಮ ಮನಸ್ಸಿನ ಬಾಗಿಲು ತೆರೆಯಿರಿ. ಬನ್ನಿ, ಹಣದ ಹಿಂದಿರುವ ವಿಜ್ಞಾನವನ್ನು ಅರಿಯೋಣ.
ಪ್ರೀತಿಯಿಂದ, ನವೀನ್ ಕುಮಾರ್ ಎಂ.

📚 ಈಗಲೇ Pre-Book ಮಾಡಿ — ₹299
ಗಣ್ಯರ ಅಭಿಪ್ರಾಯ
ನಾಡಿನ ಪ್ರಮುಖರು ಈ ಪುಸ್ತಕವನ್ನು ಹೀಗೆ ಕಂಡಿದ್ದಾರೆ
ಡಾ. ಸಿ.ಆರ್. ಚಂದ್ರಶೇಖರ್
ಡಾ. ಸಿ.ಆರ್. ಚಂದ್ರಶೇಖರ್
ಪದ್ಮಶ್ರೀ ಪುರಸ್ಕೃತ ಹಿರಿಯ ಮನೋವೈದ್ಯರು
Nimhans, Bengaluru
ಶ್ರೀಮಂತರಾಗಲು ಅಗಾಧ ಬುದ್ಧಿಶಕ್ತಿ ಬೇಕಿಲ್ಲ — ಆದರೆ 'ವ್ಯವಹಾರ ಜ್ಞಾನ' ಇಲ್ಲದಿದ್ದರೆ ಬುದ್ಧಿವಂತರೂ ಸೋಲುತ್ತಾರೆ. ಲೇಖಕರು ಈ ವೈಜ್ಞಾನಿಕ ಸತ್ಯಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸಿದ್ದಾರೆ.
⭐ Padma Shri Awardee
ಕುಂ. ವೀರಭದ್ರಪ್ಪ
ಕುಂ. ವೀರಭದ್ರಪ್ಪ (ಕುಂ.ವೀ)
ಹಿರಿಯ ಕನ್ನಡ ಸಾಹಿತಿಗಳು
ಕರ್ನಾಟಕ
ಹಣ ಮತ್ತು ಮನಸ್ಸಿಗೆ ಅಪೂರ್ವ ಸಂಬಂಧ ಕಲ್ಪಿಸಿ, Warren Buffett ಅಂತಹ ಜಾಗತಿಕ ತಜ್ಞರ ಚಿಂತನೆಗಳಿಂದ ಪ್ರಭಾವಿತವಾದ ಈ ಕೃತಿ ಅನನ್ಯ. ಲೇಖಕರು ನಿಜವಾದ "ಅರ್ಥ-ಮನೋವಿಜ್ಞಾನಿ" — ಮತ್ತು "ವ್ಯಾವಹಾರಿಕ ಕನ್ನಡ ಭಾಷಾತಜ್ಞ".
✍️ ಹಿರಿಯ ಸಾಹಿತಿ
ಲೇಖಕರ ಬಗ್ಗೆ
ನವೀನ್ ಕುಮಾರ್ ಎಂ.
ನವೀನ್ ಕುಮಾರ್ ಎಂ.
ಪತ್ರಕರ್ತ | UdyamaMitraa ಸ್ಥಾಪಕ | KUWJ ಅಧ್ಯಕ್ಷ
ನವೀನ್ ಕುಮಾರ್ ಅವರು ಶಿಕಾರಿಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರು ಮತ್ತು ಹಿರಿಯ ಪತ್ರಕರ್ತರು. ಅವರು UdyamaMitraa ಸಂಸ್ಥೆಯ ಸ್ಥಾಪಕರಾಗಿ, ಕಳೆದ 10 ತಿಂಗಳಲ್ಲಿ 100ಕ್ಕೂ ಹೆಚ್ಚು ಉದ್ಯಮಿಗಳಿಗೆ ₹9 ಕೋಟಿ ಸರ್ಕಾರಿ ಸಾಲ ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪತ್ರಿಕೋದ್ಯಮ ಮತ್ತು ಪ್ರಾಯೋಗಿಕ ವ್ಯವಹಾರ ಜ್ಞಾನದ ಸಮ್ಮಿಶ್ರಣದಿಂದ ಅವರು ಬರೆದ ಈ ಪುಸ್ತಕ, ಸಾಮಾನ್ಯ ಕನ್ನಡಿಗರ ಆರ್ಥಿಕ ಸಾಕ್ಷರತೆ ಹೆಚ್ಚಿಸಲು ನಿರ್ಮಿಸಲಾಗಿದೆ.
📰 ಹಿರಿಯ ಪತ್ರಕರ್ತ 💼 ಉದ್ಯಮ ಸಲಹೆಗಾರ 🎓 PMEGP ತಜ್ಞ 📚 ಲೇಖಕ
UdyamaMitraa — ನಿಮ್ಮ ಉದ್ಯಮ ಮಿತ್ರ
ಸರ್ಕಾರಿ ಸಾಲ ಪಡೆಯಲು ನಾವಿದ್ದೇವೆ
100+
ಸಾಲ ಪ್ರಕರಣಗಳು ಯಶಸ್ವಿ
₹9Cr
ಒಟ್ಟು ಸಾಲ ಮೊತ್ತ ದೊರಕಿಸಿಕೊಟ್ಟಿದ್ದೇವೆ
500+
ಜನರಿಗೆ ತರಬೇತಿ
100%
ಕನ್ನಡದಲ್ಲಿ ಸೇವೆ
⏰ PMEGP 2025-26 Deadline: March 31, 2026 ಅರ್ಜಿ ಸಲ್ಲಿಸಲು ತಡ ಮಾಡಬೇಡಿ — ಈಗಲೇ ಸಂಪರ್ಕಿಸಿ
✅ PMEGP ಸಾಲ ✅ Mudra ಯೋಜನೆ ✅ DPR ತಯಾರಿ ✅ Bank Follow-up
UdyamaMitraa ಸಂಪರ್ಕಿಸಿ
ನಮ್ಮ ಸೇವೆ ಏನು?
01
Project Report (DPR) ತಯಾರಿ
Bank accept ಮಾಡುವ professional DPR
02
Loan Application Submit
PMEGP / Mudra portal ಮೂಲಕ apply
03
Bank Follow-up
ಸಾಲ ದೊರಕುವವರೆಗೆ follow-up
04
Business Registration
Udyam, GST, MSME registration
Pre-Book ಮಾಡಿ

🎟️ Shimoga Open Day — Early Bird Pre-Book ₹299 | ಸೀಮಿತ ಸ್ಥಾನಗಳು!

🚀 ಲಾಂಚ್ ಆಫರ್
₹400 ಬದಲು ಕೇವಲ ₹299 — 25% OFF!
🔥 ಕೇವಲ 100 ಪ್ರತಿಗಳಿಗೆ ಮಾತ್ರ ಈ ಬೆಲೆ!
🎟️ PRE-BOOKING OPEN — Shimoga Open Day
ಮೂಲ ಬೆಲೆ
400
🔥 ವಿಶೇಷ ಆಫರ್ ಬೆಲೆ
299
₹101 ಉಳಿತಾಯ! (25% OFF)

💰 ಬೆಲೆ Update ಮಾಡಿ

📦 Free delivery (All over India)
📚 Bulk order (10+): ಬೆಲೆ ಕಡಿಮೆ ಇರ್ತದೆ
ಖಚಿತ Delivery
Original Copy
Govt. Supported
Kannada Medium
🎛️ Mode Switch
📅 Open Day Date
📦
ವಿಳಾಸ ನಮೂದಿಸಿ
ಪುಸ್ತಕ ತಲುಪಿಸಲು ನಿಮ್ಮ ವಿವರ ನೀಡಿ — ಹಣ ಪಾವತಿ ನಂತರದ ಹೆಜ್ಜೆ
ದಯವಿಟ್ಟು ಹೆಸರು ನಮೂದಿಸಿ
ಸರಿಯಾದ 10 ಅಂಕಿಯ ಸಂಖ್ಯೆ ನಮೂದಿಸಿ
ದಯವಿಟ್ಟು ಸಂಪೂರ್ಣ ವಿಳಾಸ ನಮೂದಿಸಿ
1
ನಿಮ್ಮ ವಿಳಾಸ ಸುರಕ್ಷಿತ · ಪುಸ್ತಕ 5–7 ದಿನಗಳಲ್ಲಿ ತಲುಪಿಸಲಾಗುವುದು